Home

   Municipal Reforms Cell, Directorate Of Municipal Administration has won the Bronze Award for the project Aasthi (GIS based Property Tax Information System) in National Awards for e-Governance 2011 

 

                             ಭೂ ದೇವಿಯ ಅಂತಃಕರಣದಾಳದಿಂದ ಜನತೆಯ ಜೀವ ಸೆಲೆಯಾಗಿ ಉದ್ಭವಿಸಿ ಬಂದಿರುವ  ಘಟಪ್ರಭೆಯ ಸಲೀಲತೀರ್ಥದೊಂದಿಗೆ  ಭೂ ಶಕ್ತಿ - ಧೀಶಕ್ತಿ  ಪಡೆದು  ಅರಳಿಬರುವ  ಅನ್ನದ  ರಸದ  ಚಿನ್ನದ ತೆನೆ ಹೊತ್ತು ಹಸಿರು ಹೊನ್ನದ ಕುಸುರಿನ  ಹೊದಿಕೆಯನ್ನುಟ್ಟು  ಹೋಗಿಬರುವವರಿಗೆಲ್ಲ  ಸ್ವಾಗತಿಸಲು  ಸದಾಕಾಲ ಸಜ್ಜಾಗಿ  ನಿಂತಿರುವ ನಿಸರ್ಗ ಸಿರಿದೇವಿಯ ಮಡಿಲಲ್ಲಿ ಮಿನುಗುತ್ತಿರುವ ಮುಧೋಳ ಪಟ್ಟಣಕ್ಕೆ ತಮಗೆಲ್ಲ ತುಂಬು ಹೃದಯದ ಸ್ವಾಗತ.

               ಕವಿಚಕ್ರವರ್ತಿ ರನ್ನ ಜನಿಸಿದ ನಾಡು ಚಿನ್ನದ ಬೀಡು ಎಂದೇ ಹೆಸರಾಗಿರುವ ಮುಧೋಳ ಪಟ್ಟಣವು  ಮೂಲತಃ ಕೃಷಿಪ್ರಧಾನವಾದ ನಗರವಾಗಿದೆ. ಮುಧೋಳ ಪುರಸಭೆಯು  ಕ್ರಿ.ಶ 1872 ರಲ್ಲಿ ಸ್ಥಾಪನೆಯಾಗಿದ್ದು, ಬಾಗಲಕೋಟ ಜಿಲ್ಲೆಯಿಂದ 74 ಕಿ.ಮೀ ದೂರದಲ್ಲಿದೆ. 2011ರ ಜನಗಣತಿ ಪ್ರಕಾರ ಮುಧೋಳ ನಗರದ ಒಟ್ಟು ಜನಸಂಖ್ಯೆ 42,461 ಇರುತ್ತದೆ. ಪುರಸಭೆಯು 27 ವಾರ್ಡುಗಳನ್ನು ಹೊಂದಿದ್ದು, ಪ್ರತಿಯೊಂದು ವಾರ್ಡಿಗೂ ಒಬ್ಬರಂತೆ ಚುನಾಯಿತ ಪ್ರತಿನಿಧಿಗಳಿರುತ್ತಾರೆ.

 

                  The Town Municipal Council (TMC) Mudhol was constituted in 1872. Mudhol Town  is 74 km distance from Bagalkot District. It has a population of 42,461  according to the censes of 2001. The TMC has 27 Wards and 27 number of Councilors for each Ward . Mudhol TMC stretches to an area of 12.42 SqKms.  

             

 

ಗಣಕೀಕರಣ : ಮುಧೋಳ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1991 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕಿಕರಿಸುವ ಕಾರ್ಯ ಪ್ರಗತಿಯಲ್ಲಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.

 Computerisation : Properties within Mudhol TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records will be available  online fshortly from  the year 1991. Citizens can make use of this facility to register & obtain Birth & Death Certificates.

ಪ್ರಕಟಣೆ:

                  ಮುಧೋಳ ಪಟ್ಟಣದ ಸಾರ್ವಜನಿಕರಿಗೆ ತಿಳಿಸುವದೆನೆಂದರೆ   ಕರ್ನಾಟಕ ನಾಗರಿಕರ ಸೇವೆಗಳ ಖಾತರಿ ಅಧಿನಿಯಮ 2011 (ಸಕಾಲ) ಕೌಂಟರ ಸೇವೆಯು ಮುಧೋಳ ಪುರಸಭೆಯಲ್ಲಿ ದಿನಾಂಕ 02-04-2012 ರಿಂದ ತೆರೆದಿದ್ದು ಸಾರ್ವಜನಿಕರು ಈ ಸೇವೆಯ ಪ್ರಯೋಜನೆಯನ್ನು ಪಡೆಯಬೇಕೆಂದು ಈ ಮೂಲಕ ತಿಳಿಸುತ್ತೆವೆ.

-->   "ಸಕಾಲ" ಇಂದು... ನಾಳೆ... ಇನ್ನಿಲ್ಲ ಹೇಳಿದ ಸಮಯ(ದಿನ) ತಪ್ಪೋಲ್ಲ"- KGSC(Karnataka Guarantee of Services to Citizens System)

ಸಕಾಲ ಕೌಂಟರ ಪೋನ್ ನಂ:08350-280390 

--> PGR ಸಾರ್ವಜನಿಕ ಕುಂದುಕೊರತೆ ವಿಭಾಗದ ಸಹಾಯವಾಣಿ " ಪೋ : 08350- 282728"

 

 

 

                                                                                                                 This page is maintained by Shri.R.S.Sunagar(Chief Officer)

                                                                                                                                                             Last update on 05.04.2012                                     

 

 

  

 

 

                       

                              

 

 

 

 

 

 

 

 

 

 

 

No. Of Visitors :
Last Updated   : 17/05/2012  Release History
Release 2.0.0, Powered By Karnataka Municipal Data Society & maintained by Mudhol TMC
This website can best viewed with the resolution 1024 * 768 using Internet Explorer 7.0 or above.
Valid CSS!